ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಅಂತರಾಜ್ಯ ತಾತ್ಕಾಲಿಕ ಪರ್ಮಿಟ್ ನೀಡುವ ಬಗ್ಗೆ ಗೋವಾ ಮುಖ್ಯಮಂತ್ರಿ ಡಾ| ಪ್ರಮೋದ್ ಸಾವಂತ್‌ ಅವರಿಗೆ ಮನವಿ

ಅಂತರಾಜ್ಯ ತಾತ್ಕಾಲಿಕ ಪರ್ಮಿಟ್ ನೀಡುವ ಬಗ್ಗೆ ಗೋವಾ ಮುಖ್ಯಮಂತ್ರಿ ಡಾ| ಪ್ರಮೋದ್ ಸಾವಂತ್‌ ಅವರಿಗೆ ಮನವಿ

Mon, 10 Oct 2022 01:06:06  Office Staff   S.O. News Service

ಭಟ್ಕಳ:ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿಕ್ಯಾಬ್ -ಅಸೋಸಿಯೇಶನ್‌ ವತಿಯಿಂದ ಕರ್ನಾಟಕ ಸ್ಟೇಟ್ ಪರ್ಮಿಟ್ ಹೊಂದಿರುವ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ವಾಹನಗಳಿಗೆ 
ಹಿಂದಿನಿಂದಲೂ ನಮ್ಮ ರಾಜ್ಯದಿಂದ ಸ್ಟೇಟ್ ಪರ್ಮಿಟ್ ಹೊಂದಿರುವ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ವಾಹನಗಳು ಗೋವಾ ಪ್ರವೇಶಿಸುವಾಗ ಗಡಿ ಭಾಗದಲ್ಲಿರುವ ಆ‌ಟಿಓ ಚೆಕ್ ಪೋಸ್ಟ್‌ನಲ್ಲಿ ಅಂತರಾಜ್ಯ ತಾತ್ಕಾಲಿಕ ಪರ್ಮಿಟ್‌ಗಳನ್ನು ನೀಡಲಾಗುತ್ತಿತ್ತು. ಆದರೆ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಗೋವಾ ಸರಕಾರದ ಆದೇಶದಂತೆ ಗೋವಾ ಗಡಿಯ ಆರ್.ಟಿ.ಓ. ಚೆಕ್‌ ಪೋಸ್ಟ್‌ನಲ್ಲಿ ತಾತ್ಕಾಲಿಕ ಪರ್ಮಿಟ್ ನೀಡುವುದನ್ನು ನಿಲ್ಲಿಸಿರುತ್ತಾರೆ, ಇದರಿಂದಾಗಿ ನಮ್ಮ ರಾಜ್ಯದಿಂದ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್‌ಗಳಿಗೆ ತಕ್ಷಣಕ್ಕೆ ಗೋವಾ ಪ್ರವಾಸಕ್ಕೆ ಬಂದರೆ ಹೋಗಲು ಸಾಧ್ಯವಾಗುತ್ತಿಲ್ಲ, ತಮ್ಮ ರಾಜ್ಯಗಳ ಆರ್.ಟಿ.ಓ.ಗಳಲ್ಲಿ ಗೋವಾದ ತಾತ್ಕಾಲಿಕ ಪರ್ಮಿಟ್ ಪಡೆದು, ಹೊರಡಬೇಕಾದ ಅನಿವಾರ್ಯತ ಇದೆ.ಇದಕ್ಕೆ ಹೆಚ್ಚಿನ ಸಮಯ ಮತ್ತು ದುಪ್ಪಟ್ಟು ಹಣ ವ್ಯರ್ಥವಾಗುವುದರಿಂದ ನಮಗೆ ಗೋವಾ ಪ್ರವಾಸ ಮಾಡಲು ಸಾಧ್ಯವೇ ಆಗುವುದಿಲ್ಲ. ಇದು ನಮ್ಮ ಟ್ಯಾಕ್ಸಿ ಉದ್ಯಮಕ್ಕೆ ದೊಡ್ಡ ಸಮಸ್ಯೆ ಮತ್ತು ನಷ್ಟಕ್ಕೆ ಕಾರಣವಾಗಿರುತ್ತದೆ.
ದೇಶದ ಇತರ ರಾಜ್ಯಗಳಂತೆ ಆನ್‌ಲೈನ್‌ನಲ್ಲಿ ಪರ್ಮಿಟ್ ಮತ್ತು ತೆರಿಗೆ ಪಾವತಿ ವ್ಯವಸ್ಥೆ ಮಾಡಿಕೊಡುವಂತೆ ಗೋವಾ ಮುಖ್ಯಮಂತ್ರಿ ಡಾ| ಪ್ರಮೋದ್ ಸಾವಂತ್‌ ಅವರಿಗೆ ಮನವಿ ಸಲ್ಲಿಸಲಾಯಿತು. ಅಸೋಸಿಯೇಶನ್ ಪ್ರಮುಖರಾದ ರಮೇಶ್ ಕೆ. ಕೋಟ್ಯಾನ್, ಪ್ರಕಾಶ್ ಅಡಿಗ, ಲೂಯಿಸ್ ಮಣಿಪಾಲ,ಜಯಕರ ಮಣಿಪಾಲ, ಜಗದೀಶ್ ನಾಯ್ಕ ಭಟ್ಕಳ,ಪಾಂಡುರಂಗ ನಾಯ್ಕ ಭಟ್ಕಳ,ಕೃಷ್ಣ ಕೋಟ್ಯಾನ್ ಉಪಸ್ಥಿತರಿದ್ದರು


Share: